Posts
Showing posts from July, 2020
ವೃತ್ತಿ ನೈಪುಣ್ಯತೆಗಳು ಅಸೈನ್ಮೆಂಟ್ ~9.
- Get link
- X
- Other Apps
ಮನೆಯಿಂದಲೇ ಕೆಲಸದಡಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು ಲೇಖನ. ನಾನು ರಾಯಚೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಕ್ಲಾಸಪುರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೋವಿಡ್ ಇರುವ ಈ ಸಂದರ್ಭದಲ್ಲಿ ಮನೆಯಿಂದಲೇ ಕೆಲಸದಡಿಯಲ್ಲಿ ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಈ ಅವಧಿಯನ್ನು ಕೆಳಕಂಡ ವಿಧಾನಗಳ ಮೂಲಕ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಲು ಇಚ್ಚಿಸುತ್ತೇನೆ. 1. ಆನ್ಲೈನ್ ತರಬೇತಿ- ನಮ್ಮ ಇಲಾಖೆಯು ಶಿಕ್ಷಕರ ವೃತ್ತಿ ಸಾಮರ್ಥ್ಯ ಹೆಚ್ಚಿಸಲು ನೀಡುತ್ತಿರುವ ಆನ್ಲೈನ್ ತರಬೇತಿಯಲ್ಲಿ ಭಾಗವಹಿಸಿ ಹೆಚ್ಚಿನ ವಿಷಯ ಜ್ಞಾನವನ್ನು ಪಡೆದುಕೊಳ್ಳಲು ಸಹಕಾರಿಯಾಯಿತು . 2. ತಂತ್ರಜ್ಞಾನ ಆಧಾರಿತ ಕಲಿಕೆ- ಈ ಅವಧಿಯಲ್ಲಿ ಕಲಿಕೆಯಲ್ಲಿ ತಂತ್ರಜ್ಞಾನವನ್ನು ,ಇನ್ನೂ ಹೆಚ್ಚಿನ ಜ್ಞಾನದೊಂದಿಗೆ ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡೆನು.ಉದಾ: ಆನ್ಲೈನ್ ತರಬೇತಿ, ವೈಯಕ್ತಿಕ ಬ್ಲಾಗ್ ಗಳನ್ನು ತೆರೆಯುವುದು ಮತ್ತು ಮಾಹಿತಿ ತುಂಬುವುದು. ಮುಂತಾದವು... 3.ಪಾಠೋಪಕರಣಗಳ ತಯಾರಿಕೆ- ಶಾಲೆಯಲ್ಲಿ ಬೋಧನೆಯ ಸಮಯದಲ್ಲಿ ಅವಶ್ಯವಿರುವ ಬೋಧನೋಪಕರಣಗಳನ್ನು ತಯಾರಿ ಮಾಡಿಕೊಳ್ಳಲು ಸಹಾಯಕವಾಗುತ್ತಿದೆ... 4. ಯೂಟ್ಯೂಬ್, ಮೇಘಶಾಲಾ, ಖಾನ್ ಅಕಾಡೆಮಿ, ದೀಕ್ಷಾ ಮುಂತಾದ ಶೈಕ್ಷಣಿಕ ಆಪ್ ಗಳ...